RSS

ಮೌನದ ಮಾತು

ಮೌನದೊಂದಿಗೆ
ಜಿದ್ದಾ-ಜಿದ್ದಿ ಮಾತಿಗೆ ಬಿದ್ದ
ಬುದ್ದು ನಾನು !
ಮೌನಕೊಂದು ಮಾತಿನ ರೂಪ
ಕೊಡಲು ಹೊರಟ
ಹುಚ್ಚು ಮೂಗ ನಾನು.

ಮೌನ ಕಣಿವೆಯಲಿ
ಬಿದ್ದು ಹೊರಳಾಡುತ್ತಿದರೂ,
ಆ ಕಂದಕದಿಂದ
ಮಾರ್ದನಿ ಹೊರಡಿಸುವ ಹುಮ್ಮಸ್ಸು.
ಇದಕ್ಕೆ ಅಲ್ಲವೆ ಅನ್ನುವುದು ತಮಸ್ಸು.

ಹೊರಗೆ ಕುಡಿಕೆ
ಮುಚ್ಚಿದಂತೆ ಕಂಡರೂ,
ಅದರೊಳಗೆ ಏನಿರುವುದೋ ಯಾರಿಗೆ ಗೊತ್ತು ?
ಹೊರಗೆ ಮೌನಿ ಎಂದೆನಿಸಿದರು
ಓಳಗೆ ಅದುಮಿಟ್ಟುಕೊಂಡು
ಹುದುಗಿರಬಹುದಾದ ಮಾತುಗಳ ಸಾಧ್ಯತೆ ಇತ್ತು !

ಸಾಧ್ಯ-ಅಸಾಧ್ಯತೆಗಳ
ತುಲಾಭಾರದಲ್ಲೆ ಮುಳುಗಿದ್ದ ಮನಸ್ಸು
ತಕ್ಕಡಿಯಲ್ಲಿ ತೂಗುಗಲ್ಲುಗಳಿರದಿದ್ದರೂ
ಭಾರವಾಗಿತ್ತು.
ಬೀಸೊ ಗಾಳಿಯೊಂದಿಗೆ ಹೋರಾಡುತ್ತಾ,
ಅತ್ತಿಂದಿತ್ತಾ-ಇತ್ತಿಂದತ್ತಾ
ಹೊಯ್ದಾಡುತ್ತಿದ್ದ ತಟ್ಟೆಗಳ ಮಧ್ಯ
ಸಮತೋಲನಕ್ಕಾಗಿ ತಕ್ಕಡಿ
ಹಾತೋರೆಯುತ್ತಿತ್ತು.

ಮೌನವನ್ನು ಮಾತಾಡಿಸುವ
ಆಲೋಚನೆಯ ಸುಳಿಯಲ್ಲಿ ಸಿಕ್ಕು
ಕೊಚ್ಚಿ ಹೋದ ನನ್ನನ್ನು,
ತುಮುಲ-ತೇವಲುಗಳ ಮಧ್ಯ
ವ್ಯತ್ಯಾಸ ಗೊತ್ತಿರದ ಮುಗ್ದ ತಿಮ್ಮ ಎಬ್ಬಿಸಿ;
ಹಿತ-ಮಿತವಾದ ಮಾತು-ಮೌನಗಳ ನಡುವೆ
ವ್ಯತ್ಯಾಸವೆನಿಲ್ಲ.
‘ಮಾತುಗಳ ಮಧ್ಯ ಮೌನ ಇರ್ತದೆ,
ಹಾಗೆ ಮೌನಿಯೊಳಗು ಮಾತುಗಳಿರ್ತವೆ.
ಆದರೆ ಅವುಗಳ ಪರಿಮಾಣ ಏರು-ಪೇರಿರಬಹುದು’
ಎಂದವನೆ ಎಂದಿನಂತೆ ನಿರುಮ್ಮಳ ನಗೆ ಬೀರಿ ಕಾಲ್ಕಿತ್ತ.
ತಿಮ್ಮನ ಯೋಚನಾ ಲಹರಿಯಲ್ಲೆ ಮುಳುಗಿತ್ತು
ನನ್ನ ಚಂಚಲ ಚಿತ್ತ !!

 

Summary of the Poem:
================

1st Stanza: 
————-

I am a fool – who is fighting with ‘silence’ to make it speak few words
I am dumb – who is trying hard to give an explanation about ‘Silence’.

2nd Stanza:
————-

Even though I am crawling in a ‘Silence/Silent’ valley, but trying hard to create that resounding effect[echo] of words from the same Valley. And thats what we call craziness/madness.

3rd Stanza:
————–

As we don’t know what would be inside the closed pot;Likewise even if person looks quiet in outward appearance but there might be a possibility that he might have a reserve of unspoken words inside.

4th Stanza:
————-

My soul was lost in weighing whirlpool of possibilities. Weighing machine was showing as its being fully loaded even though there was nothing on its plates. Weighing machine plates were swaying in the air because of cool breeze and in midst of all this, it was struggling to maintain its composure/balance.

5th Stanza:
————-

I was swept away in this thought process of trying to get ‘Silece’ talking and I was woken up by innocent ‘TIMMA’ and he started his sermon ‘There is no much of a difference between silence and speech.There must always be a silence in between words while talking. Likewise there would be reserve of words inside Mouni[Quiet-person],just that there will be a slight mismatch in their quantity.’
TIMMA left the place as soon as he finished his sermoning and as always with his typical innocent smile. But my fickle mind was caught up in his line of thinking.

 

 
Leave a comment

Posted by on February 24, 2014 in ಕನ್ನಡ

 

Tags:

ಮೌನ ಮೆರವಣಿಗೆ

ಗೆಳತಿ,
ನಿನ್ನ ನೋಡಿದೊಡನೆ
ನನ್ನೊಳಗೆ ಮೌನದ ಮೆರವಣಿಗೆ,
ಆ ನಿಶ್ಯಬ್ದ ತಾಳಲಾರದೆ
ಚಡಪಡಿಸಿದ ಬಡ ಹೃದಯ
ಸುರುವಿಟ್ಟುಕೊಂಡಿತು ಈ ಬರವಣಿಗೆ !!

 
Leave a comment

Posted by on June 4, 2013 in ಕನ್ನಡ

 

‎”ಉಪ್ಪು ತಿಂದವನು ನೀರು ಕುಡಿಯಲೇ ಬೇಕು”

ಈ ಪ್ರೀತಿ ಪ್ರೇಮದ ಮಧ್ಯ
ಹೊದ್ದ ಹಾಸಿಗೆ ಒದ್ದೆ,
ಹರಿದ ಕಣ್ಣೀರ ಕೋಡಿಗೆ.
ಕಣ್ಣೀರ ಹನಿಯು
ಕೆನ್ನೆ ಸವರಿ ತುಟಿಗಿಳಿದಾಗ
ನಾನದನ ನೆಕ್ಕಿದೆ.
ಅದರ ರುಚಿ ಬರೀ
ಉಪ್ಪು-ಉಪ್ಪು ,
ಆಗ ತಟ್ಟನೆ ಅರಿವಾಯ್ತು
“ಉಪ್ಪು ತಿಂದವನು ನೀರು ಕುಡಿಯಲೇ ಬೇಕು” !

 
Leave a comment

Posted by on November 6, 2012 in ಕನ್ನಡ

 

ಪ್ರೀತಿ ನಶೆ !

ಪ್ರಿಯೆ,
ಅಂದು, ಮುದ ನೀಡುವ
ಮಾತೊಂದ ನೀನಾಡಿದಾಗ
ಮದವೆರಿತು ನನಗೆ
ನಿನ್ನ ಪ್ರೀತಿ ನಶೆಯಲಿ !
ಬರಿ ತಬ್ಬಲು ಬಂದ ನನ್ನ
ಬಿಗಿದಪ್ಪಿ ಮುತ್ತಿನ ಮಳೆಗರಿದಿದ್ದೆ.
ಇಂದು ಮುತ್ತನಿಡಲು
ನಾನೆ ಬಂದರೆ
ಹೀಗೇಕೆ ರೇಗುತಿರುವೆ
ಎರಗಿ ಎರಗಿ ಮೈಮೇಲೆ?
ನನಗೆ ಗೊತ್ತು
ಇಂದಿನ ನಿನ್ನ ಕೋಪ
ನಾನು ಕುಡಿದ ನಶೆಗಾಗಿ !
ಹಾಗೇ ನಾನ್ಯಾರ ಮೇಲೆ ಕುಪಿತನಾಗಲಿ?
ಅಂದು ನೀ ನೀಡಿದ ನಶೆಗೆ !
ನಿನಗೇನು ಗೊತ್ತು
ಇ ನಶ್ಯೆಗಿಂತ
ಆ ನಶೆ
ಎಷ್ಟು ಅಪಾಯಕಾರಿ ?

 
Leave a comment

Posted by on October 27, 2012 in ಕನ್ನಡ

 

ಸತ್ಯ -ಮಿಥ್ಯ

ಸತ್ಯ
=====
ಚೆಲುವೆ,
ನವಿರಾದ ನಿನ್ನ ನಗ್ನತೆಯಲ್ಲಿ
ನನಗೆ ಕಾಣುವುದಿಲ್ಲ ನಿನ್ನ ಚೆಲುವು.
ಅಲ್ಲಿ ನಾ ನೋಡುವುದು,
ಯಾವುದೇ ಬಿಂಕು-ಬಿನ್ನಾಣಗಳಿಲ್ಲದ ನಿತ್ಯ-ಸತ್ಯವನು !
ಅದರೂ ಸತ್ಯಕ್ಕು
ತನ್ನದೇ ಅದ ಸೌಂದರ್ಯವಿದೆ.
ಅದನ್ನು ಕೆಲವರು ಮಾತ್ರ ಬಲ್ಲರು.
ಮಿಥ್ಯ
=====
ಚೆಲುವೆ,
ನಿನ್ನ ಉಡುಗೆ-ತೊಡುಗೆಯ ನೋಡಿ
ಕೆಲವರೆಂದರು, ಏನು ಸೌಂದರ್ಯ ನಿನ್ನದು !
ನಾನು ನಸುನಕ್ಕು ನುಡಿದೆನು,
ಅದೆಲ್ಲವೂ ಮಿಥ್ಯ !
ಆದರೆ ಒಂದಂತೂ ಸತ್ಯ,
ಮಿಥ್ಯಕ್ಕೆ ತಲೆದೂಗುವರು ಎಲ್ಲರು !
 
Leave a comment

Posted by on October 25, 2012 in ಕನ್ನಡ

 

Tags:

ಹೂವು !

ನನ್ನ ಕಣ್ಗಳ ಅಂಗಳದಲ್ಲಿ
ಅರಳಿದ ಹೂವು ನೀನು
ಅದು ಸುಮ್ಮನೆ ಬಾಡುವುದನ್ನ
ನಾನ್ಹೇಗೆ ಸಹಿಸಲಿ !!

ಅಳಿದು ಹೋಗಲಿ ಹೂವು
ದುಂಬಿಗೆ ಆಹಾರವಾಗಿ
ಅದರಲ್ಲಿ ಒಂದು ಧನ್ಯತೆ ಇದೆ !
ಬಂದು ಹೋಗುವುದರಲ್ಲಿ
ಅರ್ಥವಿದೆ !

ಸೂಜಿ ಮೊನೆಯಲ್ಲಿ ನರಳಿ
ಸೇರಿ ಹೋಗಲಿ ಹೂವು
ಮಾಲೆಯಲಿ.
ಸಮಾಜದ ದೇವರಿಗೆ
ಅರ್ಪಿತವಾದ ಸಾರ್ಥಕ್ಯವಿದೆ !
ಹಾಗೆ ಬಂದು ಹೋಗುವುದರಲ್ಲಿ
ತಥ್ಯವಿದೆ !

ಇಲ್ಲಿಯೇ ಇದ್ದು
ಯಾರಿಗೂ ಸಲ್ಲದವನಾಗಬೇಡ,
ಎಲ್ಲಿಯೋ ಇದ್ದು
ಎಲ್ಲರಿಗೂ ಬೇಕಾಗು!
ಎಲ್ಲರಿಗಲ್ಲದಿದ್ದರೂ
ಕೆಲವರಿಗೆ ಬೆಳಕಾಗು
ಹೀಗೆ ಬಂದು ಹೋಗುವುದರಲ್ಲಿಯೂ
ತೃಪ್ತಿ ಇದೆ !

 
Leave a comment

Posted by on February 25, 2012 in ಕನ್ನಡ

 

ಯೋಚನೆ !

ಏನಾಗಿದೆ ನನಗಿಂದು?
ಅರ್ಥವಾಗದಾಗಿದೆ
ಇಂದು-ಮುಂದು!!
ಬರೀ ಯೋಚನೆಗಳಲೇ
ಮುಳುಗಿದೆ ಮನಸು,
ಹಾಗಾಗಿ ನಿಂತಲ್ಲೇ ನಿಂತಿವೆ
ನಾ ಕಂಡ ಕನಸು.

ಏನೇ ಮಾಡಿದರೂ
ಹೊರಬರದಾಗಿದೆ
ಈ ಹೊಲಸು ಮನಸು
ಯೋಚನೆಗಳಿಂದ,
ಅದಕ್ಕೆಂದೇ ನಾನು
ಪರಿಪರಿಯಾಗಿ
ಪರಿತಪಿಸುತಿಹೆನು ಇಂದು!!

ಇದಕೆ ಪರಿಹಾರವೆನೆಂದು
ಯೋಚಿಸ ಹೋದರೆ ?
ಆಗ ಮನವೆಂದಿತು,
ಹೀಗೆ ಯೋಚಿಸುವುದೂ
ಒಂದು ಯೋಚನೆಯಲ್ಲವೇ ??
ಅದನ್ನೇ ನಿಲ್ಲಿಸಿದರೆ
ಕಡಿಮೆಯಾಗುವುದಿಲ್ಲವೇ
ಒಂದು ಯೋಚನೆ !?

ಮನಸ್ಸಿನ ಹಾಗೆ
ನಾನೂ ಯೋಚಿಸಿದ್ದರೆ
ಕಡಿಮೆಯಾಗುತ್ತಿತ್ತೇನೋ
ಒಂದು ಯೋಚನೆ,
ಆದರೆ ಆಗ ಈ ಕವಿತೆ ಬರೆಯುವ
ಯೋಚನೆಯೇ ಬರುತ್ತಿರಲಿಲ್ಲವಲ್ಲ
ಎಂದೆ ನಾನಾಗ.
ಹಾ ಹಾ !! ಎಂಥಾ ಯೋಚನೆ
ಎಂದು ವಟಗುಟ್ಟಿತು
ಅದೇ ಮನಸ್ಸು ಲೊಚ ಲೊಚನೆ !

 
Leave a comment

Posted by on February 25, 2012 in ಕನ್ನಡ